Vegetable Tips - ತರಕಾರಿ ಟಿಪ್ಸ್

ತರಕಾರಿ ಟಿಪ್ಸ್:




ತರಕಾರಿ ಕೊಳ್ಳಲು ಮತ್ತು ಅದನ್ನು ಸಂಗ್ರಹಿಸಲು ಹೆಚ್ಚು ಮಹತ್ವ ಕೊಡಬೇಕು. ಇಲ್ಲಿ ಕೆಲವು ಅಂಶಗಳನ್ನು ತಿಳಿಸಿರುವೆ. ಅನುಕೂಲವಾದರೆ ಸಂತೋಷ.
ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಬೇಯಿಸುವುದು ಕಷ್ಟ ಮತ್ತು ಬೇಯಲು ಬಹಳ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ, ಕೆಲವು ತರಕಾರಿಗಳು ಅಂಗಡಿಯಿಂದ ತಂದ ಎರಡು-ಮೂರು ದಿನಗಳ ಹಂತರದಲ್ಲಿ ಉಪಯೋಗಿಸಿ, ಕೆಲವು ಸುಮಾರು ದಿನ ತಾಜಾ ಆಗಿರುತ್ತದೆ, ಕೆಲವು ತಂದಾಗ ಎಷ್ಟೇ ಫ್ರೆಶ್ ಇದ್ದರೂ ಸಹ ಬೇಗ ಬಲಿಯುತ್ತವೆ ಮತ್ತು ಒಣಗಿದಂತಾಗುತ್ತದೆ. ಫ್ರಿಡ್ಜ್ ನಲ್ಲಿ ಇಟ್ಟರು ಸಹ ಕೆಲವೊಂದು ಬೇಗ ಹಾಳಾಗುತ್ತವೆ.

ತರಕಾರಿಗಳನ್ನು ಪೇಪರ್ ನಲ್ಲಿ ಸುತ್ತಿಟ್ಟು ಕವರ್ ನಲ್ಲಿ ಇಡಿ, ಕವರ್ ನಲ್ಲಿ ಇಟ್ಟಾಗ ನೀರಿನ ಅಂಶ ಹೀರಿಕೊಂಡು ಬಹಳ ದಿನ ತರಕಾರಿ ಇರುತ್ತದೆ, ಬೇಗ ಹಾಳಾಗುವುದಿಲ್ಲ. ಪ್ಲಾಸ್ಟಿಕ್ ಕವರ್ ಗಿಂತ, ಪೇಪರ್ ಕವರ್ ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ತರಕಾರಿ ಚೆನ್ನಾಗಿರುತ್ತದೆ.

Radish - ಮೂಲಂಗಿ ಉಪಯೋಗಗಳು:


ಮೂಲಂಗಿ:

ಮೂಲಂಗಿಯಿಂದ ತುಂಬಾ ಉಪಯೋಗಗಳಿವೆ, ಇದನ್ನು ನಾನಾ ರೀತಿಯಾಗಿ ಆಹಾರದಲ್ಲಿ ಬಳಸಬಹುದು. ಬೇಳೆಯೊಂದಿಗೆ ಸೇರಿಸಿ ಸಾಂಬಾರ್ ತಯಾರಿಸಬಹುದು, ಚಟ್ನಿಯೊಂದಿಗೆ ಜಜ್ಜಿ ಸೇರಿಸಿವುದರಿಂದ ಮೂಲಂಗಿ ಚಟ್ನಿ ತಯಾರಿ ಆಗುತ್ತದೆ. ಚಪಾತಿ ಹಿಟ್ಟಿಗೆ ಸೇರಿಸಿ ಪರೋಟ ಮಾಡಬಹುದು. ಸಲಾಡ್ ತರಹ ಉಪಯೋಗಿಸಿ ಹಸಿಯಾಗಿ ತಿನ್ನಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉಪಯೋಗಗಳು ಹೆಚ್ಚು.

- ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.

- ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.

- ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.

- ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.

- ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.

- ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.

- ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.

- ದಿನನಿತ್ಯ ಸಲಾಡ್ ರೀತಿಯಲ್ಲಿ ಮೂಲಂಗಿಯನ್ನು ಸೇವಿಸಿ, ಇದರಿಂದ ತುಂಬಾ ಅನುಕೂಲಗಳಾಗುತ್ತವೆ. ಒಂದೇ ತರಹ ತಿನ್ನಲು ಬೇಸರ ಎನಿಸಿದರೆ, ಚಟ್ನಿಯೊಂದಿಗೆ ಬೆರೆಸಿ, ಮೂಲಂಗಿ ಚಟ್ನಿ  ಅಥವ ಮೂಲಂಗಿ ಪರೋಟ ತಯಾರಿಸಿ ತಿನ್ನಬಹುದು.
ಮೂಲಂಗಿ ಪರೋಟ ಮತ್ತು ಚಟ್ನಿ ರೆಸಿಪಿಯನ್ನು ಅಡಿಗೆ ರೆಸಿಪಿಯಲ್ಲಿ ನೋಡಬಹುದು.

Fennel Seeds - ಸೋಂಪು

ಸೋಂಪು ಕಾಳನ್ನು ಪ್ರತಿದಿನ ಊಟವಾದ ಬಳಿಕ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.ಊಟದ ನಂತರ ತಿನ್ನುವುದರಿಂದ ಬಾಯಲ್ಲಿನ ವಾಸನೆಯೂ ಕಮ್ಮಿಯಾಗುತ್ತದೆ.

ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದರ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ತೊಂದರೆಗಳು ನಿವಾರಣೆಗಳಾಗುತ್ತವೆ.

ಸೋಂಪು ಅನ್ನು ನೀರಿನಲ್ಲಿ ಕುದಿಸಿ, ಅದರ ಡಿಕಾಕ್ಷನ್ ತಯಾರಿಸಿ, ಅದನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆನೋವು ಮತ್ತು ಇತರೆ ತೊಂದರೆ ನಿವಾರಣೆ. ಪೀರಿಯಡ್ಸ್ ಕೂಡ ರೆಗ್ಯುಲರ್ ಆಗಿ ಇರುತ್ತದೆ.

ಇದು ಮಕ್ಕಳಿಗೂ ಒಳ್ಳೆಯದು. ಇದರಿಂದ ಅವರಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

Cardamom - ಏಲಕ್ಕಿ


ಏಲಕ್ಕಿ:

ಏಲಕ್ಕಿಯೂ ಮಸಾಲೆ ಪದಾರ್ಥಗಳ ಜಾತಿಗೆ ಸೇರುತ್ತದೆ. ಇದನ್ನು ಮಸಾಲೆಗೆ ಉಪಯೋಗಿಸುತ್ತೇವೆ. ಇದನ್ನು ಅಡಿಗೆಗಳಿಗೆ ಬಳಸುವುದರಿಂದ ಅದರ ಘಮ ಘಮ ವಾಸನೆ ಅಡಿಗೆಗೆ ಬರುತ್ತದೆ.
ಏಲಕ್ಕಿಗೆ ಒಂದು ತರಹ ಮಹತ್ವವಿದೆ. ಎಲ್ಲಾ ಸಿಹಿಅಡಿಗೆಗಳಲ್ಲೂ ಇದನ್ನು ಉಪಯೋಗಿಸಿದಾಗಲೇ ಅಡುಗೆ ಸಂಪೂರ್ಣವಾದಂತೆ. ಏಲಕ್ಕಿ ಹಾಕದ ಸಿಹಿ ತಿಂಡಿಗಳು ಇಲ್ಲ. ಯಾವುದೇ ರೀತಿಯ ಸಿಹಿ ತಿನಿಸುಗಳಿಗೆ ಇದನ್ನು ಬಳಸುವುದರಿಂದ ಅದರದ್ದೇ ಆದ ಒಂದು ತರಹ ರುಚಿ ಮತ್ತು ಸುವಾಸನೆಯನ್ನು ಕೊಡುತ್ತದೆ.
ಏಲಕ್ಕಿಯನ್ನು ತಿನ್ನುವುದರಿಂದ ಅಜೀರ್ಣ ನಿವಾರಣೆಯಾನುತ್ತದೆ.
ಇದನ್ನು ತಲೆನೋವು ಬಂದಾಗ ತಿನ್ನುವುದರಿಂದ ತಲೆನೋವು ಕಮ್ಮಿಯಾಗುತ್ತದೆ.
ಬಾಯಿಯಲ್ಲಿನ ದುರ್ಗಂಧವೂ ಕಮ್ಮಿಯಾಗುತ್ತದೆ.
ಏಲಕ್ಕಿಯನ್ನು ಊಟವಾದ ತಕ್ಷಣ ತಿನ್ನುವುದರಿಂದಲೂ ಒಳ್ಳೆಯ ಪರಿಣಾಮಗಳನ್ನು ನೀಡುತ್ತದೆ.
ಇದು ನಮ್ಮ ದೇಹದಲ್ಲಿ ಅನೇಕ ರೀತಿಯ ಕ್ರಿಯೆಗಳಿಗೆ ಉತ್ತಮ ಸಹಕಾರವನ್ನು ಮಾಡುತ್ತದೆ.
ವಾಂತಿ,ಕೆಮ್ಮು , ಗ್ಯಾಸ ಪ್ರಾಬ್ಲಮ್ ಇತರೆ ತೊಂದರೆಗಳಿಗೆ ಪರಿಣಾಮಕಾರಿಯಾಗಿದೆ.

Turmeric - ಅರಿಶಿಣ/ಅರಿಸಿನ:

ಅರಿಶಿಣ / ಅರಿಸಿನದ ಉಪಯೋಗಗಳು:

ಅರಿಶಿಣ / ಅರಿಷಿಣ / ಅರಿಶಿನ / ಅರಿಸಿನ / ಹಳದಿ - ಇದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಆಗಾಗಿ ಎಲ್ಲ ಪದಗಳು ಬಳಕೆಯಲ್ಲಿವೆ.
                                    
                         


ಮ್ಮ ದೇಶದಲ್ಲಿ ಅರಿಶಿಣ ಮತ್ತು ಕುಂಕುಮಕ್ಕೆ ಒಂದು ಬಹಳ ಮಹತ್ತರವಾದ ಸ್ಥಾನವಿದೆ. ಇದು ಅಡಿಗೆಗಷ್ಟೇ ಸೀಮಿತವಾಗಿಲ್ಲ. ಅರಿಷಿಣಕ್ಕೆ ನಮ್ಮ ದೇಶದಲ್ಲಿ ಅದಕ್ಕಾಗಿಯೇ ಒಂದು ಪವಿತ್ರತೆಯನ್ನು ನೀಡಿದ್ದೇವೆ. ಅರಿಸಿನವನ್ನು ದೇವರಿಗೆ ಪೂಜಿಸಲು, ಬಾಗಿಲ ಹೊಸ್ತಿಲಿಗೆ ಇಡಲು, ಕುಂಕುಮಕ್ಕೆ ಕೊಡುವಾಗ ಮತ್ತು ಅಡಿಗೆಗೆ ಉಪಯೋಗಿಸುತ್ತೇವೆ. ಮುತ್ತೈದೆಯರು ಅದನ್ನು ಒಂದು ವರದಾನವೆಂದು ಉಪಯೋಗಿಸುವರು. ಅರಿಸಿಣ ಒಂದೇ ಈ ರೀತಿ ನಾನಾ ಬಗೆಯಲ್ಲಿ ಉಪಯೋಗಕ್ಕೆ ಬರುವುದು ಮತ್ತು ಅದನ್ನು ದಿನನಿತ್ಯ ಎಲ್ಲರೂ ಯಾವುದಕ್ಕಾದರೂ ಬಳಸಿಯೇ ಬಳಸುತ್ತಾರೆ.
ನಮ್ಮಗಳಿಗಂತೂ ಅರಿಶಿನ - ಕುಂಕುಮವಿಲ್ಲದೆ ಪೂಜೆ ಸಂಪೂರ್ಣವಾಗುವುದೇ ಇಲ್ಲ. ದೇವರ ಪೂಜೆಗಂತೂ ಹೂವಿಲ್ಲದಿದ್ದರೂ ಪರವಾಗಿಲ್ಲ. ಅರಿಷಿಣ- ಕುಂಕುಮವಂತೂ ಇರಲೇ ಬೇಕು. ಈಗಾಗಿ ಅರಿಶಿನವೂ ನಮ್ಮ ದಿನನಿತ್ಯದ ಅಡಿಗೆಯಲ್ಲಿ, ಪೂಜೆಯಲ್ಲಿ ಒಂದಾಗಿದೆ. ಮುತ್ತೈದೆಯರು ಪ್ರತಿದಿನ ಅದನ್ನು ಮಾಂಗಲ್ಯಕ್ಕೆ ಹಚ್ಚುವುದರಿಂದ ಶ್ರೇಯಸ್ಸು ಮತ್ತು ಒಳ್ಳೆಯದಾಗುವುದು. ಹೊಸಲಿಗೆ ಪ್ರತಿದಿನ ಇಡುವುದರಿಂದ ಕ್ರಿಮಿ-ಕೀಟಗಳ ಹತೋಟಿ ಇರುತ್ತದೆ ಮತ್ತು ಶುಭ ಸಂಕೇತವೂ ಆಗಿದೆ. ನಮ್ಮ ಬೆಳಗಿನ ಕೆಲಸಗಳು ಪ್ರಾರಂಭವಾಗುವುದೆ ಅರಿಸಿನದಿಂದ. ಒಳ್ಳೆಯ ಶುಭಕಾರ್ಯಗಳಿಗೂ ಸಹ ಅರಿಶಿನಕ್ಕೆ ಅದರದ್ದೇ ಆದ ಮಹತ್ವವಿದೆ. ಎಲ್ಲಾ ಶುಭ ಸಂದರ್ಭದಲ್ಲೂ ಇದನ್ನು ಬಳಸುತ್ತೇವೆ.
ಅರಿಶಿಣದ ಕೊಂಬು ಚಿನ್ನದ ಮಾಂಗಲ್ಯಕ್ಕೆ ಸಮಾನವಾಗಿದೆ, ಕೆಲವರು ಅರಿಷಿಣದ ಕೊಂಬನ್ನೆ ಮದುವೆಯಲ್ಲಿ ಮಾಂಗಲ್ಯವಾಗಿ ಉಪಯೋಗಿಸುವರು. ಆಗಾಗಿ ಇದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಮತ್ತು ಕಟ್ಟಲಾರದ ಬೆಲೆ ಇದೆ. ಅರಿಶಿನದ ದಾರ ಹೀಗೆ ಇದು ಹಲವಾರು ಬಗೆಯಲ್ಲಿ ಬಳಸಲು ಅನುಕೂಲವಾಗಿದೆ.


೧.ಅರಿಸಿನವನ್ನು ಹಾಲಿನ ಕೆನೆಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ, ಮುಖದಲ್ಲಿನ ಗುಳ್ಳೆಗಳು ಕಮ್ಮಿಯಾಗುತ್ತವೆ ಮತ್ತು ಹೊಳಪು ಬರುತ್ತದೆ.

೨.ಅರಿಸಿನದ ಪುಡಿಯನ್ನು ಕಡಲೆಹಿಟ್ಟಿಗೆ ಬೆರೆಸಿ,ಹಾಲಿನೊಂದಿಗೆ ಕಲೆಸಿ ಸಹ ಮುಖಕ್ಕೆ ಹಚ್ಚಬಹುದು.

೩.ಅರಿಶಿನದ ಪುಡಿಯನ್ನು ಸ್ವಲ್ಪ ಬಿಸಿ ಮಾಡಿದ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕೆಮ್ಮು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುತ್ತದೆ.

೪.ಇದು ಆಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡಿಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ.

೫.ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿರುವಾಗ ಈ ಅರಿಶಿಣದ ಪುಡಿಯನ್ನು ಗಾಯದ ಮೇಲೆ ಹಾಕಿ ಅದುವುದರಿಂದ ರಕ್ತ ಬರುವುದು ನಿಲ್ಲುತ್ತದೆ. (ಚಿಕ್ಕ ಗಾಯಗಳಿಗೆ) ಆಂಟಿಸೆಪ್ಟಿಕ್ ಆಗಿರುವುದರಿಂದ ಬೇಗನೆ ಗಾಯವೂ ಒಣಗುತ್ತದೆ/ಮಾಯುತ್ತದೆ.
೬.ಅರಿಶಿಣದ ಕೊಂಬನ್ನು ಹಾಲಿನಲ್ಲಿ ತೇದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಗುಳ್ಳೆಗಳು ಇಲ್ಲವಾಗುತ್ತವೆ ಮತ್ತು ಮುಖವು ಹೊಳಪು ಬರುತ್ತದೆ. ಇದು ಅರಿಷಿಣದ ಪುಡಿಯಲ್ಲಿ ಕಲೆಸಿ ಹಚ್ಚುವುದಕ್ಕಿಂತ ತುಂಬಾ ಉತ್ತಮವಾದದ್ದು. ಅಂಗಡಿಯಲ್ಲಿ ತಂದ ರೆಡಿಮೇಡ್ ಪುಡಿ ಉಪಯೋಗಿಸುವುದರಿಂದ ಹೆಚ್ಚು ಅನುಕೂಲ ದೊರೆಯದು, ಅದರಲ್ಲಿ ಕೆಲವು ಬಣ್ಣ ಮಿಶ್ರಿತವಾಗಿರುತ್ತವೆ. ಆದ್ದರಿಂದ ತೇದು ಹಚ್ಚುವುದರಿಂದ ಸ್ವಚ್ಛವಾದ ಅರಿಸಿನ ಸಿಗುತ್ತದೆ.

BAKING SODA TIPS

ಅಡಿಗೆ ಸೋಡದ ಉಪಯೋಗಗಳು:

. ಅಡಿಗೆ ಸೋಡಾದಿಂದ ಫ್ರಿಡ್ಜ್ ಅನ್ನು ಒರೆಸಿದರೆ ಅದರಲ್ಲಿರುವ ವಾಸನೆ ಹೋಗುತ್ತದೆ ಮತ್ತು ಶುಚಿಯಾಗುತ್ತದೆ.
. ನೆಲ ಒರೆಸುವಾಗ ಒಂದೆರಡು ಚಮಚ ಅಡಿಗೆ ಸೋಡವನ್ನು ನೀರಿನಲ್ಲಿ ಬೆರೆಸಿ ಒರೆಸಿದರೆ ಶುಭ್ರವಾಗುತ್ತದೆ.
. ಒಡವೆಗಳನ್ನು ಅಡಿಗೆ ಸೋಡಾದಿಂದ ತೊಳೆದಾಗ ಹೊಳೆಯುತ್ತವೆ.
. ಬೀರು ಒಳಗೆ,ಕಬೋರ್ಡ್ ಒಳಗೆ,ಅಡಿಗೆ ಕೋಣೆಗಳಲ್ಲಿ ಮತ್ತು ಫ್ರಿಡ್ಜ್ ಒಳಗೆ,ಒಂದು ಡಬ್ಬಿಯಲ್ಲಿ ಸೋಡಾ ಹಾಕಿ,ಡಬ್ಬಿಯನ್ನು ಮುಚ್ಚದೆ ತೆರೆದಿಟ್ಟು ಇಟ್ಟರೆ ಅವುಗಳಲ್ಲಿರುವ ಒಂದು ತರಹ ಕೆಟ್ಟವಾಸನೆ ಬರುವುದನ್ನು ಸೋಡಾ ಹೀರಿಕೊಳ್ಳುತ್ತದೆ.
. ಸಿಂಕ್ ಕಟ್ಟಿಕೊಂಡಾಗ ಅದಕ್ಕೆ ಅಡಿಗೆ ಸೋಡಾ ಮತ್ತು ವಿನಿಗರ್ ಅನ್ನು ಹಾಕಿ, ಒಂದೆರಡು ನಿಮಿಷದ ನಂತರ ಅದಕ್ಕೆ ಬಿಸಿನೀರನ್ನು ಹಾಕುವುದರಿಂದ ಕಟ್ಟಿಕೊಂಡಿರುವ ಸಿಂಕ್ ಕ್ಲೀನ್ ಆಗುತ್ತದೆ.
. ಪಾತ್ರೆಯನ್ನು ತೊಳೆಯುವಾಗ ವಾಶಿಂಗ್ ಲಿಕ್ವಿಡ್ ಜೊತೆ ಸ್ವಲ್ಪ ಸೋಡಾ ಮತ್ತು ವಿನಿಗರ್ ಅನ್ನು ಬೆರೆಸಿಕೊಂಡು ಪಾತ್ರೆಯನ್ನು ತೊಳೆದರೆ ಪಾತ್ರೆಗಳು ಸ್ವಚ್ಛವಾಗುತ್ತವೆ ಮತ್ತು ಹೊಳೆಯುತ್ತವೆ.
. ವಿನಿಗರ್ ಹಾಕಿ ಪಾತ್ರೆಯನ್ನು ತೊಳೆಯುವುದರಿಂದ ಪಾತ್ರೆಯಲ್ಲಿನ ಕೆಟ್ಟ ಕಟು ವಾಸನೆಗಳು ಹೋಗುತ್ತವೆ.

OM SHRI GANESHAYA NAMAH:

" ಓಂ ಶ್ರೀ ಮಹಾ ಘಂ ಗಣಪತೆಯೇ ನಮಃ "

All rights reserved. Powered by Blogger.