Roti and Chapati Tips - ರೊಟ್ಟಿ ಮತ್ತು ಚಪಾತಿಯ ಟಿಪ್ಸ್
ರೊಟ್ಟಿ ಮತ್ತು ಚಪಾತಿಯ ಟಿಪ್ಸ್:
೧. ರೊಟ್ಟಿ ಮಾಡುವಾಗ ಸ್ವಲ್ಪ ನೀರನ್ನು ಕುದಿಸಿ, ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಸ್ವಲ್ಪ ನಿಮಿಷ ಬಿಟ್ಟು ಅದನ್ನು ಗೊಟಾಯಿಸಿ, ಕಲೆಸಿ, ಚೆನ್ನಾಗಿ ನಾದಿ ರೊಟ್ಟಿ ಮಾಡಿದರೆ ರೊಟ್ಟಿಗಳು ದೋಸೆಯಂತೆ ಮೃದುವಾಗಿ ಬರುತ್ತವೆ. (ಇದು ಒಂದು ರೀತಿ)
೨. ರೊಟ್ಟಿ ಹಿಟ್ಟನ್ನು ಕಲೆಸುವಾಗ ಅದಕ್ಕೆ ಒಂದು/ಎರಡು ಚಮಚ ಡಾಲ್ಡ ಅಥವಾ ವೆಜೆಟಬಲ್ ಗೀಯನ್ನು ಮತ್ತು ನೀರಿನ ಜೊತೆ ಹಾಲನ್ನು ಸೇರಿಸಿ ಕಲೆಸಿ, ಚೆನ್ನಾಗಿ ನಾದಿ,ರೊಟ್ಟಿ ಮಾಡಿದರೆ ರೊಟ್ಟಿಗಳು ಮೃದುವಾಗಿ ಬರುತ್ತದೆ ಮತ್ತು ಬೇಯಿಸುವಾಗ ಉಬ್ಬುತ್ತದೆ.(ಈ ರೀತಿ ಸಹ ಒಂದು)
೩. ಇದೇರೀತಿ ಚಪಾತಿ ಹಿಟ್ಟಿಗೂ ಕಲೆಸಿದರೆ ಚಪಾತಿಗಳು ಸಹ ಚೆನ್ನಾಗಿ ಮೃದುವಾಗಿ ಬರುತ್ತವೆ ಮತ್ತು ರುಚಿಯಾಗಿಯೂ ಇರುತ್ತದೆ.
೪. ಚಪಾತಿ ಹಿಟ್ಟನ್ನು ತುಂಬಾ ಹೊತ್ತಿನವರೆಗೂ ಕಲೆಸಿ ಇಡಬೇಡಿ. ತುಂಬಾ ಹೊತ್ತು ನೆನೆಸಿದರೆ ಅದರಲ್ಲಿರುವ ಅಂಶಗಳೆಲ್ಲಾ ಹಾಳಾಗುತ್ತವೆ. ಅರ್ಧ ಅಥವಾ ಮುಕ್ಕಾಲು ಗಂಟೆ ನೆನೆಸಿದರೆ ಸಾಕು. ಹೆಚ್ಚೆಂದರೆ ಹದಿನೈದು ನಿಮಿಷಗಳಷ್ಟೇ ಸಾಕು.
೫. ಚಪಾತಿ ಹಿಟ್ಟನ್ನು ಕಲೆಸಿ ತಂಗಳು ಪೆಟ್ಟಿಗೆಯಲ್ಲಿ ಸಹ ಇಟ್ಟು ಉಪಯೋಗಿಸಿದರೆ ಅದರಲ್ಲಿನ ಸತ್ವಗಳೆಲ್ಲಾ ನಶಿಸುತ್ತವೆ.
೬. ಹಿಟ್ಟನ್ನು ತುಂಬಾ ಹೊತ್ತು ನೆನೆಸಿದರೆ ಚಪಾತಿಗಳೇನೋ ಮೃದುವಾಗಿ ಬರುತ್ತವೆ,ಆದರೆ ಅದರಲ್ಲಿನ ಒಳ್ಳೆಯ ಸತ್ವಯುತ ಅಂಶಗಳು ಇರುವುದಿಲ್ಲ.
೭. ಗೋಧಿ ಹಿಟ್ಟು ಬೀಸಲು ಕೊಡುವಾಗ ಅದಕ್ಕೆ ಮೆಂತ್ಯ,ಹೆಸರುಕಾಳು ಮತ್ತು ಉಪ್ಪು ಹಾಕಿ ಬೀಸಿಟ್ಟುಕೊಂಡರೆ,ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.ಜೊತೆಯಲ್ಲಿ ಸೋಯಾಬೀನ್ಸ್ ಸಹ ಸೇರಿಸಬಹುದು.
೮. ರಾಗಿ ರೊಟ್ಟಿ ತಯಾರಿಸುವಾಗ ರಾಗಿ ಹಿಟ್ಟಿನೊಂದಿಗೆ ಸ್ವಲ್ಪ ಗೋಧಿಹಿಟ್ಟು ಸೇರಿಸಿ ಕಲೆಸಿ,ರೊಟ್ಟಿ ತಯಾರಿಸಿದರೆ,ರೊಟ್ಟಿಗಳು ಮುರಿದುಕೊಳ್ಳದೆ ಚೆನ್ನಾಗಿ ಬರುತ್ತವೆ.
೯. ಯಾವುದೇ ತರಹದ ರೊಟ್ಟಿಗಳು ತಯಾರಿಸುವಾಗ ಕೆಲವೊಮ್ಮೆ ಅದಕ್ಕೆ ಕೆಲವು ತರಕಾರಿಗಳನ್ನು ಸೇರಿಸಿ ತಯಾರಿಸಿದರೆ, ರುಚಿಯೂ ಬೇರೆ ರೀತಿಯಾಗಿ ಚೆನ್ನಾಗಿರುತ್ತದೆ. ಮತ್ತು ವಿಟಮಿನ್ಸ್ ಮತ್ತು ಪ್ರೋಟಿನ್ಸ್ ಸಿಗುತ್ತದೆ ಹಾಗೂ ಬಗೆಬಗೆಯ ರೊಟ್ಟಿಗಳನ್ನು ಸವಿಯಬಹುದು.
12:59 PM | Labels: KITCHEN / COOKING TIPS, Roti and Chapathi Tips -ರೊಟ್ಟಿ ಮತ್ತು ಚಪಾತಿಯ ಟಿಪ್ಸ್ |
You can leave a response
Subscribe to:
Post Comments (Atom)
All rights reserved. Powered by Blogger.
0 comments:
Post a Comment